
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ವಾರ್ಡರ್ ಮಂಜುನಾಥ್ ಹವೇಲಿ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆಗಸ್ಟ್ 22 ರಂದು ಜೈಲಿಗೆ ನಿಯಮಬಾಹಿರ ವಸ್ತುಗಳನ್ನು ತರಲು ಯತ್ನಿಸಿದ್ದನ್ನು ತಡೆದಿದ್ದಕ್ಕೆ ದ್ವೇಷ ಸಾಧಿಸಿದ್ದ ಆರೋಪಿಗಳು, ಸೆಪ್ಟೆಂಬರ್ 2 ರಂದು ವಾರ್ಡರ್ ಅವರನ್ನು ಕೊಠಡಿಗೆ ಎಳೆದು ಹಲ್ಲೆ ನಡೆಸಿದ್ದಾರೆ.
ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಗನ್, ಮೊಹಮ್ಮದ್ ರಿಜ್ವಾನ್, ನಿಯಾಜ್ ಮತ್ತು ಕಲಂದರ್ ಶಫಿ ಎಂಬ ಐವರು ಆರೋಪಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳಡಿ ಪ್ರಕರಣ ದಾಖಲಾಗಿದೆ.