
ತಮಿಳುನಾಡು ಸರ್ಕಾರವು ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ಘೋಷಿಸಿದೆ.
ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಅಭ್ಯರ್ಥಿಗಳ ಮನವಿಗಳನ್ನು ಆಲಿಸಿ ಈ ಆದೇಶ ಹೊರಡಿಸಿದ್ದು, ಈ ನಿಯಮ ಮುಂದಿನ ಐದು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ.
ಸಾಮಾನ್ಯ ವರ್ಗದ ಗ್ರೂಪ್-1 ಪರೀಕ್ಷೆಯ ವಯೋಮಿತಿ 32ರಿಂದ 37 ವರ್ಷಕ್ಕೆ ಹಾಗೂ ಮೀಸಲಾತಿ ವರ್ಗದ ವಯೋಮಿತಿ 37ರಿಂದ 42 ವರ್ಷಕ್ಕೆ ಏರಿಕೆಯಾಗಲಿದೆ.