
ಇಪಿಎಫ್‌ಒ 3.0 ವ್ಯವಸ್ಥೆಯಡಿ ಉದ್ಯೋಗಿಗಳು ಯುಪಿಐ ಅಥವಾ ಯುಪಿಐ-ಸಕ್ರಿಯ ಎಟಿಎಂಗಳ ಮೂಲಕ ತಮ್ಮ ಪಿಎಫ್ ಬ್ಯಾಲೆನ್ಸ್‌ನ ಶೇ 50 ರಿಂದ 75ರಷ್ಟು ಹಣವನ್ನು ನೇರವಾಗಿ ಹಿಂಪಡೆಯಬಹುದು.
ವೈದ್ಯಕೀಯ ತುರ್ತು, ಶಿಕ್ಷಣ ಅಥವಾ ಮದುವೆಯಂತಹ ಅಗತ್ಯಗಳಿಗಾಗಿ ಆಟೋ-ಸೆಟಲ್ ಮೆಂಟ್ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಕ್ಲೇಮ್‌ಗಳು 3 ದಿನಗಳಲ್ಲಿ ಇತ್ಯರ್ಥವಾಗಲಿವೆ.
2026ರ ಆರ್ಥಿಕ ವರ್ಷಕ್ಕೆ ಶೇ 8.25 ಬಡ್ಡಿದರ ನಿಗದಿಪಡಿಸಿದ ಬೆನ್ನಲ್ಲೇ, ಉಮಂಗ್ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಷನ್ ಮೂಲಕ ಆನ್‌ಲೈನ್ ಕ್ಲೇಮ್ ಸಲ್ಲಿಕೆಯನ್ನು ಸರಳಗೊಳಿಸಲಾಗಿದೆ.