
ತಮ್ಮ ನಟನೆಯ ಸಿನಿಮಾ ಒಂದರ ಬೋಲ್ಡ್ ದೃಶ್ಯ ಆನ್ಲೈನ್ನಲ್ಲಿ ಲೀಕ್ ಆಗಿ ವೈರಲ್ ಆಗಿದ್ದರಿಂದ ತೀವ್ರ ಮಾನಸಿಕ ಒತ್ತಡ ಎದುರಿಸಿದ್ದಾಗಿ ನಟಿ ರಾಧಿಕಾ ಆಪ್ಟೆ ನೆಟ್ಫ್ಲಿಕ್ಸ್ನ 'ಲಸ್ಟ್ ಸ್ಟೋರೀಸ್ 3' ಪ್ರಚಾರದ ವೇಳೆ ಹಂಚಿಕೊಂಡಿದ್ದಾರೆ.
ತಮ್ಮ ಮನೆಯ ವಾಚ್ಮನ್ ಮೊಬೈಲ್ನಲ್ಲಿಯೂ ಆ ಲೀಕ್ ಆದ ವಿಡಿಯೋವನ್ನು ನೋಡಿದಾಗ ತೀವ್ರ ಆಘಾತಕ್ಕೊಳಗಾಗಿ, ನಾಲ್ಕು ದಿನಗಳ ಕಾಲ ಮನೆ ಬಿಟ್ಟು ಹೊರಬರಲು ಭಯಪಟ್ಟು ಬಾಗಿಲು ಹಾಕಿಕೊಂಡಿದ್ದೆ ಎಂದು ಅವರು ತಿಳಿಸಿದ್ದಾರೆ.
ಈ ಕಹಿ ಘಟನೆಯಿಂದ ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕಗೊಂಡು ಬಂದಿದ್ದ ಉತ್ತಮ ಸಿನಿಮಾವೊಂದನ್ನು ತಿರಸ್ಕರಿಸಿದ್ದಾಗಿ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಆ ಸಿನಿಮಾ ಮಾಡದಂತೆ ಸಲಹೆ ನೀಡಿದ್ದಾಗಿ ರಾಧಿಕಾ ವಿವರಿಸಿದ್ದಾರೆ.