
ನೀತಿ ಆಯೋಗದ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಸುಮಾರು ಶೇ. 30ರಷ್ಟು ಭಾಗ ಅಂದರೆ ಸುಮಾರು 40 ಕೋಟಿ ಜನರು ಯಾವುದೇ ವಿಮೆ ಅಥವಾ ರಕ್ಷಣೆಯಿಲ್ಲದೆ 'ಮಿಸ್ಸಿಂಗ್ ಮಿಡಲ್' ವರ್ಗದಲ್ಲಿದ್ದಾರೆ.
ಇವರ ಆದಾಯ ತುಸು ಹೆಚ್ಚಿರುವುದರಿಂದ ಆಯುಷ್ಮಾನ್ ಭಾರತ್ನಂತಹ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ ಮತ್ತು ಪ್ರೈವೇಟ್ ವಿಮೆ ಪಡೆಯಲು ಸಾಕಷ್ಟು ಹಣವಿರುವುದಿಲ್ಲ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಹಾಗೂ ಔಷಧಗಳ ಅಧಿಕ ವೆಚ್ಚದಿಂದಾಗಿ ಈ ಮಧ್ಯಮ ವರ್ಗದ ಜನರು ಅನಾರೋಗ್ಯ ಬಂದಾಗ ಸಂಪೂರ್ಣ ಖರ್ಚನ್ನು ತಮ್ಮ ಸ್ವಂತ ಜೇಬಿನಿಂದಲೇ ಭರಿಸಬೇಕಾಗಿದೆ.