
ರಾಜ್ಯದ 'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳ ಹೆಸರಿನಲ್ಲಿ ಭೂಮಿ ಖರೀದಿಸಲು ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದ್ದು, ಆಸ್ತಿ ಶಾಶ್ವತವಾಗಿ ಉಳಿಯುವಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ದೇವಸ್ಥಾನಗಳ ಹುಂಡಿ ಹಣದ ದುರುಪಯೋಗ ತಡೆಯಲು ಆಗಸ್ಟ್ ಅಂತ್ಯದೊಳಗೆ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, 'ಎ' ವರ್ಗದ ದೇವಸ್ಥಾನಗಳ ಅನುದಾನದ ಶೇ 10ರಷ್ಟನ್ನು 'ಸಿ' ವರ್ಗದ ಅಭಿವೃದ್ಧಿಗೆ ಬಳಸಲು ನಿರ್ದೇಶಿಸಲಾಗಿದೆ.
ಒತ್ತುವರಿಯಾದ ದೇವಸ್ಥಾನದ ಭೂಮಿಯನ್ನು ಮೂರು ತಿಂಗಳ ಒಳಗಾಗಿ ಸರ್ವೇ ಮಾಡಿಸಿ ತೆರವುಗೊಳಿಸಲು ಹಾಗೂ ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.