
ಓಲಾ, ಉಬರ್ ಮತ್ತು ರ್ಯಾಪಿಡೋ ಸೇರಿದಂತೆ ಎಲ್ಲಾ ರೈಡ್-ಹೇಲಿಂಗ್ ಆ್ಯಪ್ಗಳಲ್ಲಿ ಬುಕಿಂಗ್ ಮಾಡುವ ಮುನ್ನವೇ ಗ್ರಾಹಕರಿಂದ ಮುಂಗಡ ಟಿಪ್ಸ್ ಪಡೆಯುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸಾರಿಗೆ ಸಚಿವಾಲಯ ಆದೇಶಿಸಿದೆ.
ಮುಂಗಡವಾಗಿ ಹೆಚ್ಚುವರಿ ಹಣ ಕೇಳುವುದು 'ಮೋಟಾರು ವಾಹನ ಅಗ್ರಿಗೇಟರ್ ಗೈಡ್ಲೈನ್ಸ್ 2025' ರ ಪ್ರಕಾರ ನಿಯಮಬಾಹಿರ ಮತ್ತು ಅನುಚಿತ ವ್ಯಾಪಾರ ವಹಿವಾಟು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಹೊಸ ನಿಯಮದ ಪ್ರಕಾರ ಗ್ರಾಹಕರು ಪ್ರಯಾಣ ಮುಗಿದ ನಂತರವಷ್ಟೇ ಸ್ವಇಚ್ಛೆಯಿಂದ ಟಿಪ್ಸ್ ನೀಡಬಹುದಾಗಿದ್ದು, ಈ ಹಣದಿಂದ ಕಂಪನಿಗಳು ಯಾವುದೇ ಕಮಿಷನ್ ಕಡಿತಗೊಳಿಸದೆ ಸಂಪೂರ್ಣವಾಗಿ ಚಾಲಕನಿಗೆ ತಲುಪಿಸಬೇಕಾಗುತ್ತದೆ.