
ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಉತ್ಪಾದಿಸುವ ಮಧ್ಯಪ್ರಾಚ್ಯ ದೇಶಗಳಲ್ಲಿ 2026ರಲ್ಲಿ ಆರ್ಥಿಕ ಬೆಳವಣಿಗೆ ಮೈನಸ್ 1.3 ಪ್ರತಿಶತ ದಾಖಲಾಗಲಿದೆ ಎಂದು ಐಎಂಎಫ್ ಎಚ್ಚರಿಸಿದೆ.
ಉತ್ತರ ಆಫ್ರಿಕನ್ ದೇಶಗಳು ಹಾಗೂ ಪಾಕಿಸ್ತಾನದ ಆರ್ಥಿಕತೆಗಳು 2026ರಲ್ಲಿ ತೀವ್ರ ಹಿನ್ನಡೆ ಸಾಧಿಸಲಿವೆ ಎಂದು ಐಎಂಎಫ್ನ ವರದಿ ತಿಳಿಸಿದೆ.
ಮಧ್ಯಪ್ರಾಚ್ಯದ ಆರ್ಥಿಕತೆಯು 2027ರಲ್ಲಿ ಶೇ. 6.6ರ ದರಕ್ಕೆ ಪುಟಿದೇಳುವ ಸಾಧ್ಯತೆಯಿದ್ದು, ಇದು ತೈಲ ಬಿಕ್ಕಟ್ಟು ಶಮನಗೊಳ್ಳುವುದರ ಮೇಲೆ ಅವಲಂಬಿತವಾಗಿದೆ.