
ಸಿಂಗಾಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ವೃತ್ತಿಜೀವನದ ಜರ್ನಿ ಕುರಿತು ಮಾತನಾಡುತ್ತಾ ಕಣ್ಣೀರಿಟ್ಟಿದ್ದಾರೆ.
ಮೂರು ದಶಕಗಳ ಕಾಲ ಸತತವಾಗಿ ಕೆಲಸ ಮಾಡಿ ಕುಟುಂಬವನ್ನು ನಿರ್ಲಕ್ಷಿಸಿರುವುದಾಗಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಚಲನಚಿತ್ರೋತ್ಸವದಲ್ಲಿ ಆಮಿರ್ ಖಾನ್ ಅವರಿಗೆ 'ಸ್ಕ್ರೀನ್ ಐಕಾನ್ ಅವಾರ್ಡ್' ನೀಡಿ ಗೌರವಿಸಲಾಗಿದ್ದು, ಅವರ 'ಲಗಾನ್' ಚಿತ್ರದ 25ನೇ ವಾರ್ಷಿಕೋತ್ಸವದ ಪ್ರದರ್ಶನವೂ ನಡೆಯಿತು.