
ಸಿಎಸ್ಆರ್ ನಿಧಿಯ ಹೆಸರಿನಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಬ್ಯಾಂಕ್ಗಳಿಂದ ಸುಮಾರು 200 ಕೋಟಿ ರೂ. ಹಣವನ್ನು ಅಕ್ರಮವಾಗಿ ಲೂಟಿ ಮಾಡಿದ ಜಾಲವನ್ನು ಜಾರಿ ನಿರ್ದೇಶನಾಲಯ ಭೇದಿಸಿದೆ.
ಯಾವುದೇ ವೈದ್ಯಕೀಯ ಪದವಿ ಇಲ್ಲದ ಧರ್ಮೇಂದ್ರ ಕುಮಾರ್ ಚಂದ್ರದೇವ್ ಸಿಂಗ್ ಎಂಬ ನಕಲಿ ವೈದ್ಯ ಈ ದಂಧೆಯ ಕೇಂದ್ರಬಿಂದುವಾಗಿದ್ದು, ನಕಲಿ ಟ್ರಸ್ಟ್ಗಳ ಮೂಲಕ ಹಣ ಪಡೆದಿದ್ದಾನೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ-ಎನ್ಸಿಆರ್ನ 8 ಸ್ಥಳಗಳಲ್ಲಿ ಇಡಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆ ಹಾಗೂ ನಗದನ್ನು ವಶಪಡಿಸಿಕೊಂಡಿದೆ.