
ಜಪಾನ್ನಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಸಾಂಪ್ರದಾಯಿಕ ನೀಲಿ ಬಣ್ಣವನ್ನು ಕೈಬಿಟ್ಟು ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿದಿವೆ.
ನಡೆದ ಮೊದಲ ಪಂದ್ಯಗಳಲ್ಲಿ ಪುರುಷರ ತಂಡವು ಇಂಡೋನೇಷ್ಯಾ ವಿರುದ್ಧ 13–1 ಗೋಲುಗಳಿಂದ ಹಾಗೂ ಮಹಿಳಾ ತಂಡವು ಉಜ್ಬೇಕಿಸ್ತಾನ್ ವಿರುದ್ಧ 19–0 ಗೋಲುಗಳ ಭರ್ಜರಿ ಅಂತರದ ಗೆಲುವು ಸಾಧಿಸಿವೆ.
ಆಟಗಾರರಿಗೆ ದೃಶ್ಯಗೋಚರತೆ ಸುಲಭವಾಗಲೆಂದು ನೀಲಿ ಅಂಕಣದಲ್ಲಿ ಆಡಲು ಈ ಕೇಸರಿ ಜರ್ಸಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಮೂಲಗಳು ತಿಳಿಸಿವೆ.