
ರಾಜ್ಯಾದ್ಯಂತ ಸಂಗ್ರಹಿಸಲಾದ ಪೆಟ್ರೋಲ್ ಸ್ಯಾಂಪಲ್‌ಗಳನ್ನು ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ನಿಗದಿತ ಶೇ 20ರ ಬದಲಿಗೆ ಶೇ 22ರಿಂದ ಶೇ 31ರವರೆಗೆ ಎಥೆನಾಲ್ ಮಿಶ್ರಣವಿರುವುದು ಪತ್ತೆಯಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.
ಪೆಟ್ರೋಲ್‌ನಲ್ಲಿ ಅತಿಯಾದ ಎಥೆನಾಲ್ ಮಿಶ್ರಣದಿಂದಾಗಿ ವಾಹನಗಳ ಮೈಲೇಜ್ ಕುಸಿಯುವುದಲ್ಲದೆ ಎಂಜಿನ್ ಹಾನಿಗೀಡಾಗಿ ಪ್ರತಿ ಸವಾರರಿಗೆ ದುರಸ್ತಿಗೆ 2,000ದಿಂದ 3,000 ರೂ. ವರೆಗೆ ಆರ್ಥಿಕ ಹೊರೆ ಬೀಳುತ್ತಿದೆ.
ಬಂಕ್‌ಗಳಲ್ಲಿ ಎಥೆನಾಲ್ ಪ್ರಮಾಣ ಕಡ್ಡಾಯವಾಗಿ ಪ್ರದರ್ಶಿಸಬೇಕು, ಅತಿ ಹೆಚ್ಚು ಬೆರೆಸುವ ಕಂಪನಿಗಳಿಗೆ ದಂಡ ವಿಧಿಸಬೇಕು ಹಾಗೂ ಪರಿಹಾರಕ್ಕೆ ವಿಶೇಷ ನಿಧಿ ಸ್ಥಾಪಿಸಬೇಕು ಎಂದು ಸಚಿವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.