
ಪಂಜಾಬ್ ಅಂತರ ಜಿಲ್ಲಾ ಹಿರಿಯರ ಪಂದ್ಯಾವಳಿಯಲ್ಲಿ ಅಮೃತಸರ ತಂಡದ ಪರ ಆಡಿದ ಅಭಿಷೇಕ್ ಶರ್ಮಾ, ಟಾರ್ನ್ ತಾರನ್ ತಂಡದ ವಿರುದ್ಧ 91 ಎಸೆತಗಳಲ್ಲಿ 233 ರನ್ ಸಿಡಿಸಿದ್ದಾರೆ.
ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ ಅಭಿಷೇಕ್ 15 ಬೌಂಡರಿ ಮತ್ತು 25 ಸಿಕ್ಸರ್ಗಳನ್ನು ಬಾರಿಸಿದ್ದು, ತಂಡವು 50 ಓವರ್ಗಳಲ್ಲಿ 8 ವಿಕೆಟ್ಗೆ 533 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕಳಪೆ ಫಾರ್ಮ್ನಿಂದ ಬಳಲಿದ್ದ ಅಭಿಷೇಕ್, ಈ ದ್ವಿಶತಕದ ಮೂಲಕ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.