
ಅಮೆಜಾನ್‌ನ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಸೇಲ್ ಅಕ್ಟೋಬರ್ 8ರ ಮಧ್ಯರಾತ್ರಿಯಿಂದ ಎಲ್ಲ ಗ್ರಾಹಕರಿಗೆ ಆರಂಭವಾಗಿದ್ದು, ಫ್ಲಿಪ್‌ಕಾರ್ಟ್ ಸೇಲ್ ಅಕ್ಟೋಬರ್ 9ರಿಂದ ಸಾಮಾನ್ಯರಿಗೆ ಸಿಗಲಿದೆ.
ಎರಡೂ ಇ-ಕಾಮರ್ಸ್ ತಾಣಗಳಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 17ರ ಬೆಲೆ 79,999 ರೂ.ಗಳಿಂದ ಆರಂಭವಾಗಲಿದ್ದು, ಆಕ್ಸಿಸ್ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ ಶೇ. 10ರವರೆಗೆ ತಕ್ಷಣದ ರಿಯಾಯಿತಿ ಸಿಗಲಿದೆ.