
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಶೂಟರ್ ಎಲವೇನಿಲ್ ವಲರಿವನ್ ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಫೈನಲ್ನಲ್ಲಿ ಎಲವೇನಿಲ್ 252.4 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆದರೆ, ಜಪಾನ್ನ ಹಿನಾಟಾ ತೈಚಿ 253 ಅಂಕಗಳೊಂದಿಗೆ ಹೊಸ ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದರು.
ಇದಕ್ಕೂ ಮುನ್ನ ಎಲವೇನಿಲ್ ವಲರಿವನ್, ಸೋನಮ್ ಮಾಸ್ಕರ್ ಹಾಗೂ ವಿದರ್ಶಾ ಕೆ. ವಿನೋದ್ ಅವರನ್ನೊಳಗೊಂಡ ತಂಡವು 1898.0 ಅಂಕಗಳೊಂದಿಗೆ ತಂಡ ವಿಭಾಗದಲ್ಲೂ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿತು.