
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾದ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ ರಾಮಪ್ಪ ಶೆಟ್ಟಿ ನಿಧನರಾಗಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ ಬೈಕ್ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ವೇಗದ ಕಾರು ಡಿಕ್ಕಿ ಹೊಡೆದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಶಿಕ್ಷಕರ ಅಂತಿಮ ದರ್ಶನದ ವೇಳೆ ಶಾಲಾ ಮಕ್ಕಳು ಪಾರ್ಥಿವ ಶರೀರದ ಮೇಲೆ ಹೂಮಳೆಗೈದು ಭಾವುಕ ವಿದಾಯ ಹೇಳಿದ್ದಾರೆ.