
ಕೊರೊನಾ ಸಂದರ್ಭದ 21 ದಿನಗಳ ಲಾಕ್‌ಡೌನ್‌ನ ನೈಜ ಸವಾಲುಗಳು ಮತ್ತು ಮಾನವ ಸಂಬಂಧಗಳ ಸುತ್ತ ಹೆಣೆದ ‘ಲಾಕ್‌ಡೌನ್ 21 ಡೇಸ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದೆ.
ಮಧುಮೋಹನ್ ಮತ್ತು ಮಾಚಯ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಅನಿಲ್ ಸಿ.ಕೆ., ಅರುಣಾ ಯಾದವ್, ಪ್ರಿಯಾಂಕಾ ರಾಜ್ ಸೇರಿದಂತೆ ಹಲವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಅರುಣಾ ಯಾದವ್ ಫಿಲ್ಮ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಸಾಮಾಜಿಕ ಗಂಭೀರತೆಯ ಜೊತೆಗೆ ಪ್ರೇಮಕಥೆಯನ್ನು ಒಳಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.