
ಬಿಗ್ ಬಾಸ್ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಸಂಗೀತ ಶೃಂಗೇರಿ ಮತ್ತು ವಿನಯ್ ಗೌಡ ಅವರ ಕಟ್ಟುನಿಟ್ಟಿನ ನಿರ್ಧಾರಗಳು ಸ್ಪರ್ಧಿಗಳ ನಡುವಿನ ಪೈಪೋಟಿಯನ್ನು ಹೆಚ್ಚಿಸಿವೆ.
ವೇದಿಕೆಯಲ್ಲಿ ಟಾಸ್ಕ್ ನೀಡಿದಾಗ ಅಮುಕು ಡುಮುಕು ಅವರು ನೇರವಾಗಿ ಉತ್ತರಿಸಿದ್ದಕ್ಕೆ ಅಸಮಾಧಾನಗೊಂಡ ವಿನಯ್ ಗೌಡ, ಅವರನ್ನು ವೇದಿಕೆಯಿಂದ ಹೊರಗೆ ಕಳುಹಿಸಿದ್ದಾರೆ.
ಬಿಗ್ ಬಾಸ್ ಮನೆ ಪ್ರವೇಶಿಸಲು ಒಟ್ಟು 60 ಜನ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳು ನಡೆಯುತ್ತಿದ್ದು, ಕಾರ್ಯಕ್ರಮದ ತಾಪ ದಿನದಿಂದ ದಿನಕ್ಕೆ ಏರುತ್ತಿದೆ.