
ಛತ್ತೀಸ್ಗಢದ 2013ರ 'ಝೀರಮ್ ಘಾಟಿ ಮಾವೋವಾದಿ ದಾಳಿ' ಪ್ರಕರಣದಲ್ಲಿ ಜಗದಾಳಪುರ ಎನ್ಐಎ ವಿಶೇಷ ನ್ಯಾಯಾಲಯವು ದೋಷಿಗಳೆಂದು ಸಾಬೀತಾದ 10 ಮಂದಿ ನಕ್ಸಲರಿಗೆ ಗಲ್ಲು ಶಿಕ್ಷೆ ವಿಧಿಸಿದೆ.
2013ರ ಮೇ 25ರಂದು ಬಸ್ತಾರ್ ಜಿಲ್ಲೆಯ ಝಿರಾಮ್ ಕಣಿವೆಯಲ್ಲಿ ನಡೆದ ಈ ನಕ್ಸಲ್ ದಾಳಿಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಸಾವನ್ನಪ್ಪಿದ್ದರು.
ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲು ಪ್ರತಿವಾದಿಗಳಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.