
ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಐತಿಹಾಸಿಕ ಸಿನಿಮಾ ‘ಶಾಂತಿ ಕ್ರಾಂತಿ’ಯನ್ನು ಸದ್ಯಕ್ಕೆ ಮರುಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅವರ ಸಹೋದರ ಬಾಲಾಜಿ ಸ್ಪಷ್ಟಪಡಿಸಿದ್ದಾರೆ.
ಚಿತ್ರದ ಒರಿಜಿನಲ್ ನೆಗೆಟಿವ್ಸ್ ಕರಗಿ ಹೋಗಿದ್ದು (ಮೆಲ್ಟ್), ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಡಾಲ್ಬಿ ಅಟ್ಮಾಸ್ ಮತ್ತು ಡಿಐ ಮಾಡಲು ಬೇರೆ ಮೂಲಗಳ (ಸೋರ್ಸ್) ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಸೂಕ್ತ ಮೂಲಗಳು ದೊರೆತರೂ ಕಲರಿಂಗ್, ರೀರೆಕಾರ್ಡಿಂಗ್ ಮತ್ತು ಸೆನ್ಸಾರ್ ಪ್ರಕ್ರಿಯೆಗಳಿಗೆ ಕನಿಷ್ಠ 8 ತಿಂಗಳಿಂದ 1 ವರ್ಷದವರೆಗೆ ಸಮಯ ಬೇಕಾಗುವುದರಿಂದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬ ವದಂತಿ ಸುಳ್ಳು ಎಂದಿದ್ದಾರೆ.