
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದಲ್ಲಿ ಭತ್ತದ ಹುಲ್ಲಿಗೆ ಹಚ್ಚಿದ ಬೆಂಕಿ ನಿಯಂತ್ರಣ ತಪ್ಪಿ ವ್ಯಾಪಿಸಿದ ಪರಿಣಾಮ 20ಕ್ಕೂ ಹೆಚ್ಚು ರೈತರ ಪಂಪ್ಸೆಟ್ಗಳು ಸುಟ್ಟು ಭಸ್ಮವಾಗಿವೆ.
ಈ ಘಟನೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಸಾಲ ಮಾಡಿ ಅಳವಡಿಸಿದ್ದ ಉಪಕರಣಗಳು ಕಳೆದು ಕಂಗಾಲಾಗಿದ್ದಾರೆ.
ಈ ಅನಾಹುತಕ್ಕೆ ಆಂಧ್ರ ಮೂಲದ ಗುತ್ತಿಗೆ ರೈತರೇ ಕಾರಣವೆಂದು ಆರೋಪಿಸಿ ಸ್ಥಳೀಯ ರೈತರು ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.