
2014ರಲ್ಲಿ ಬಿಡುಗಡೆಯಾಗಿದ್ದ ರಜನೀಕಾಂತ್ ಅಭಿನಯದ ‘ಕೊಚಾಡಿಯನ್’ ಚಿತ್ರವನ್ನು ಎಐ ತಂತ್ರಜ್ಞಾನ ಬಳಸಿ ಮರು ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಸಾಲ ಮರುಪಾವತಿ ವಿವಾದದ ಹಿನ್ನೆಲೆಯಲ್ಲಿ ಫೈನ್ಯಾನ್ಶಿಯರ್ಗಳು ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಸಿನಿಮಾ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ.
ನಿರ್ಮಾಪಕರು 20.40 ಕೋಟಿ ರೂ. ಮರುಪಾವತಿಸಬೇಕಿದ್ದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದರೂ, ಪ್ರಸ್ತುತ ಚಿತ್ರದ ಹಕ್ಕು ಹೊಂದಿರುವವರ ವಿರುದ್ಧ ಪರಿಹಾರ ಕೋರದಿರುವುದರಿಂದ ಬಿಡುಗಡೆಗೆ ತಡೆಯಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.