
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದ ಹಿನ್ನೆಲೆಯಲ್ಲಿ, ಪರೀಕ್ಷಾ ಅಕ್ರಮ ತಡೆಗಟ್ಟಲು AI ತಂತ್ರಜ್ಞಾನ ಬಳಸಿಕೊಂಡು ಹೈಬ್ರೀಡ್ ಮಾಡೆಲ್‌ನಲ್ಲಿ ಪರೀಕ್ಷೆ ನಡೆಸುವಂತೆ ಸೈಬರ್ ತಜ್ಞ ಡಾ. ಅನಂತ್ ಪ್ರಭು ಅವರು ಟಿವಿ9 ಜೊತೆಗೆ ಸಲಹೆ ನೀಡಿದ್ದಾರೆ.
NEET, JE, UPSC ಸೇರಿದಂತೆ ಹಲವು ಪರೀಕ್ಷೆಗಳಿಗೆ ಒಂದೇ ರೀತಿ ವ್ಯವಸ್ಥೆ ಮಾಡಬೇಕು, ಎಕ್ಸಾಂ ಪೇಪರ್ ಬದಲಿಗೆ ಲ್ಯಾಪ್‌ಟಾಪ್ ಅನ್ನು ಅಭ್ಯರ್ಥಿಗಳಿಗೆ ನೀಡಬೇಕು ಎಂದು ಡಾ. ಅನಂತ್ ಪ್ರಭು ಅಭಿಪ್ರಾಯಪಟ್ಟಿದ್ದಾರೆ.
ಪರೀಕ್ಷಾ ಕೇಂದ್ರ ಪ್ರವೇಶದ ವೇಳೆ ಹಾಗೂ OMR ಹಾಳೆ ಸಲ್ಲಿಸುವ ಮೊದಲು ಆಧಾರ್ ಆಧಾರಿತ ಬೆರಳಚ್ಚು ಮತ್ತು ಮುಖ ಗುರುತಿಸುವಿಕೆ (Facial Recognition) ಹೊಂದಿದ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಸೂಚಿಸಿದ್ದಾರೆ.