
ಲಿಂಕನ್ನಲ್ಲಿ ನಡೆದ ನ್ಯೂಝಿಲೆಂಡ್ ಎ ವಿರುದ್ಧದ ಮೊದಲ ಅನ್ಅಫೀಶಿಯಲ್ ಟೆಸ್ಟ್ ಪಂದ್ಯವು ಮಂದ ಬೆಳಕಿನ ಕಾರಣದಿಂದ ಡ್ರಾನಲ್ಲಿ ಅಂತ್ಯಗೊಂಡಿದೆ.
ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ಎ ತಂಡವು ದೇವದತ್ ಪಡಿಕ್ಕಲ್ ಅವರ 199 ರನ್ ಹಾಗೂ ಸಾಯಿ ಸುದರ್ಶನ್ ಅವರ 91 ರನ್ಗಳ ನೆರವಿನಿಂದ ಒಟ್ಟು 516 ರನ್ ಗಳಿಸಿ ನ್ಯೂಝಿಲೆಂಡ್ಗೆ 313 ರನ್ ಗುರಿ ನೀಡಿತ್ತು.
ಗೆಲುವಿಗೆ ಕೇವಲ 1 ವಿಕೆಟ್ ಅಗತ್ಯವಿದ್ದಾಗ ಅಂಪೈರ್ ಮಂದ ಬೆಳಕಿನಿಂದ ಪಂದ್ಯವನ್ನು ಸ್ಥಗಿತಗೊಳಿಸಿದ ಕಾರಣ ಭಾರತದ ಜಯ ಕೈತಪ್ಪಿತು.