
ತೆಲುಗು ನಟ ಸುನಿಲ್ ಅವರು ಶಿವರಾಜ್ ಕುಮಾರ್ ಅವರೊಂದಿಗೆ 'ಒರಿಜಿನಲ್ ಮಾನ್ಸ್ಟರ್' ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಟಿವಿ9ಗೆ ನೀಡಿದ ಸಂದರ್ಶನದಲ್ಲಿ, ಶಿವರಾಜ್ ಕುಮಾರ್ ಅವರ ಸರಳತೆ ಮತ್ತು ಅವರ ನಟನೆಯ 'ಓಂ' ಸಿನಿಮಾ ತಮಗೆ ಬಹಳ ಇಷ್ಟ ಎಂದು ಸುನಿಲ್ ತಿಳಿಸಿದ್ದಾರೆ.
ಕನ್ನಡ ಸಿನಿಮಾಗಳಿಂದ ಬರುತ್ತಿರುವ ಆಫರ್ಗಳ ಬಗ್ಗೆ ಮಾತನಾಡಿದ ಸುನಿಲ್, ಚಿಕ್ಕಣ್ಣ ನಟಿಸುತ್ತಿರುವ ಮತ್ತೊಂದು ಸಿನಿಮಾದಲ್ಲೂ ತಾವು ನಟಿಸುತ್ತಿರುವುದಾಗಿ ಹೇಳಿದ್ದಾರೆ.