
ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿ, ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಖಾದ್ಯ ತೈಲಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಎಫ್‌ಎಸ್‌ಎಸ್‌ಎಐ ದೇಶಾದ್ಯಂತ ವಿಶೇಷ ತಪಾಸಣೆಗೆ ಸೂಚಿಸಿದೆ.
ಆಹಾರ ಕಲಬೆರಕೆಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಧಿಕಾರಿಗಳು ನಿರಂತರ ಸ್ಯಾಂಪ್ಲಿಂಗ್ ನಡೆಸುವಂತೆ ಹಾಗೂ ಮಾರುಕಟ್ಟೆಗಳಲ್ಲಿ 'ಫುಡ್ ಸೇಫ್ಟಿ ಆನ್ ವ್ಹೀಲ್ಸ್' ವಾಹನಗಳ ಮೂಲಕ ಸ್ಥಳದಲ್ಲೇ ಗುಣಮಟ್ಟ ಪರೀಕ್ಷಿಸಲು ನಿರ್ದೇಶಿಸಲಾಗಿದೆ.
ತಪಾಸಣೆ ಮತ್ತು ಸ್ಯಾಂಪ್ಲಿಂಗ್ ವರದಿಗಳನ್ನು ಕಡ್ಡಾಯವಾಗಿ FoSCoS ಹಾಗೂ FoSCoRIS ಪೋರ್ಟಲ್‌ಗಳಲ್ಲಿ ರಿಯಲ್‌ಟೈಮ್‌ನಲ್ಲಿ ಅಪ್‌ಡೇಟ್ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಎಫ್‌ಎಸ್‌ಎಸ್‌ಎಐ ಕಟ್ಟುನಿಟ್ಟಿನ ಸೂಚನೆ ನೀಡಿದೆ.