
2026ರ ನವೆಂಬರ್ 8ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಪವಿತ್ರ ದಿನದಂದು ಮಹಾಲಕ್ಷ್ಮಿ ಹಾಗೂ ಕುಬೇರನನ್ನು ಪೂಜಿಸಿ ದೀಪಗಳಿಂದ ಮನೆ ಅಲಂಕರಿಸಲಾಗುತ್ತದೆ.
ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಸಮ ಸಂಖ್ಯೆಯ ದೀಪಗಳಿಗಿಂತ 5, 7, 9, 11ರಂತಹ ಬೆಸ ಸಂಖ್ಯೆಯಲ್ಲಿ ದೀಪಗಳನ್ನು ಬೆಳಗಿಸುವುದು ಅತ್ಯಂತ ಶ್ರೇಯಸ್ಕರವಾಗಿದೆ.
ಹೀಗೆ ಬೆಸ ಸಂಖ್ಯೆಯಲ್ಲಿ ದೀಪಗಳನ್ನು ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದರ ಜತೆಗೆ ದೈವಿಕ ಕೃಪೆ ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.