
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಮುಖ ವೇಗಿಗಳಾದ ಖಲೀಲ್ ಅಹ್ಮದ್ ಮತ್ತು ನಾಥನ್ ಎಲ್ಲಿಸ್ ಅವರನ್ನು SRHಗೆ ನೀಡಿ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜಾಕ್ ಎಡ್ವರ್ಡ್ಸ್ ಅವರನ್ನು ಪಡೆದುಕೊಂಡಿದೆ.
ಕೇವಲ ಬ್ಯಾಟಿಂಗ್ ನಂಬಿ ಡೆತ್ ಓವರ್ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್‌ಗಳನ್ನು ಬಿಟ್ಟುಕೊಟ್ಟಿರುವುದು CSK ಮಾಡಿದ ದೊಡ್ಡ ತಪ್ಪು ಎಂದು ಕ್ರಿಕೆಟ್ ತಜ್ಞರು ಮತ್ತು ಮಾಜಿ ಆಟಗಾರರು ವಿಶ್ಲೇಷಿಸಿದ್ದಾರೆ.
ಕಳೆದ ಸೀಸನ್‌ನಲ್ಲಿ ಬೌಲರ್‌ಗಳು ಓವರ್‌ಗೆ ಸರಾಸರಿ 11 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಹಿನ್ನೆಲೆಯಲ್ಲಿ, ಈ ರಿಸ್ಕಿ ಟ್ರೇಡ್ ಡೀಲ್ ತಂಡದ ಪ್ಲೇಯಿಂಗ್ XI ಸಮತೋಲನಕ್ಕೆ ಧಕ್ಕೆ ತಂದಿದೆ.