
ಪಿಂಕ್ ಲೈನ್ ಮೆಟ್ರೋ ಮಾರ್ಗದ ತಾವರೆಕೆರೆ ನಿಲ್ದಾಣದ ಹೆಸರನ್ನು ‘ತಾವರೆಕೆರೆ ಬಿಸ್ಮಿಲ್ಲಾ ನಗರ’ ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ನಿಲ್ದಾಣದ ಸುತ್ತಮುತ್ತ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಎಂಡಿ ಪಿ.ಸಿ. ಜಾಫರ್ ಅವರಿಗೆ ಪತ್ರ ಬರೆಯಲಾಗಿದೆ.
ಸ್ಥಳ ಗುರುತಿಸಲು ಅನುಕೂಲವಾಗುವಂತೆ ನಿಯಮಾನುಸಾರ ಈ ಹೆಸರು ಪರಿಗಣಿಸುವಂತೆ ಮನವಿಯಲ್ಲಿ ಕೋರಲಾಗಿದೆ.