
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮೂಲಕ ಮಾನವ ಮೂತ್ರಪಿಂಡವನ್ನು ಕೇವಲ 37 ನಿಮಿಷಗಳಲ್ಲಿ ಸಾಗಿಸಿ ಜೀವ ಉಳಿಸುವ ಕಾರ್ಯಕ್ಕೆ ನೆರವು ನೀಡಲಾಗಿದೆ.
ಕೋಲಾರದ ಜಾಲಪ್ಪ ಆಸ್ಪತ್ರೆಯಿಂದ ಹೊರಟು ಬೆನ್ನಿಗಾನಹಳ್ಳಿ ನಿಲ್ದಾಣದಿಂದ ಮಧ್ಯಾಹ್ನ 2:58ಕ್ಕೆ ಹೊರಟ ಮೆಟ್ರೋ ರೈಲು ಮಧ್ಯಾಹ್ನ 3:35ಕ್ಕೆ ಅತ್ತಿಗುಪ್ಪೆ ನಿಲ್ದಾಣ ತಲುಪಿದೆ.
ಅಲ್ಲಿಂದ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ಕಿಡ್ನಿ ತಲುಪಿಸಲಾಗಿದ್ದು, ಬಿಎಂಆರ್‌ಸಿಎಲ್ ಇದುವರೆಗೆ ಒಟ್ಟು ಏಳು ಬಾರಿ ಅಂಗಾಂಗ ಸಾಗಣೆಗೆ ನೆರವು ನೀಡಿದೆ.