
ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿ ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಕಥೆಯನ್ನು ಹೊಂದಿರುವ 'ಹನುಮಾನ್ ಅಂಶ್' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಸೆಪ್ಟೆಂಬರ್ 26ಕ್ಕೆ 50 ದಿನಗಳನ್ನು ಪೂರೈಸಿರುವ ಈ ಚಿತ್ರವು 51ನೇ ದಿನದಂದು 6.26 ಕೋಟಿ ರೂ. ಗಳಿಸುವುದರೊಂದಿಗೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ಗಳಿಕೆ 297.79 ಕೋಟಿ ರೂ.ಗೆ ಏರಿಕೆಯಾಗಿದೆ.
ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದ ಮೆಗಾ ಹಿಟ್ ಆಗಿರುವ ಈ ಚಿತ್ರವು ಈ ಭಾನುವಾರದ ವೇಳೆಗೆ ಸುಲಭವಾಗಿ 300 ಕೋಟಿ ರೂ. ಕ್ಲಬ್ ಸೇರುವುದು ಖಚಿತವಾಗಿದೆ.