
ಕಜಕಸ್ತಾನ್‌ನ ಅಸ್ತಾನಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 59 ಕೆಜಿ ವಿಭಾಗದ ಫೈನಲ್‌ನಲ್ಲಿ ಮನಿಷಾ ಭಾನ್ವಾಲಾ ಚಿನ್ನದ ಪದಕ ಗೆದ್ದಿದ್ದಾರೆ.
ಫೈನಲ್ ಪಂದ್ಯದಲ್ಲಿ ಅಮೆರಿಕದ ಎಲಿಜಬೆತ್ ನೆಟ್ಟೆ ಅವರನ್ನು 8-6 ಅಂತರದಿಂದ ಸೋಲಿಸಿದ ಅವರು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ.
ಮೊದಲಾರ್ಧದಲ್ಲಿ 1-5ರಿಂದ ಹಿನ್ನಡೆಯಲ್ಲಿದ್ದರೂ ದ್ವಿತೀಯಾರ್ಧದಲ್ಲಿ ಅದ್ಭುತವಾಗಿ ಚೇತರಿಸಿಕೊಂಡು ಮನಿಷಾ ಈ ಐತಿಹಾಸಿಕ ಜಯ ಸಾಧಿಸಿದ್ದಾರೆ.