
ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಸೇಂಟ್ ಲೂಯಿಸ್ ರ್‍ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯ ರ್‍ಯಾಪಿಡ್ ಸುತ್ತುಗಳ ಬಳಿಕ 12 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.
ಒಟ್ಟು 18 ಸುತ್ತುಗಳ ಪೈಕಿ 9 ಸುತ್ತುಗಳ ರ್‍ಯಾಪಿಡ್ ವಿಭಾಗದಲ್ಲಿ ಪ್ರಜ್ಞಾನಂದ ನಾಲ್ಕು ಪಂದ್ಯಗಳನ್ನು ಗೆದ್ದು, ನಾಲ್ಕು ಡ್ರಾ ಮಾಡಿಕೊಂಡು, ಒಂದು ಪಂದ್ಯದಲ್ಲಿ ಸೋಲು ಕಂಡಿದ್ದಾರೆ.
ಸುಮಾರು ₹1.90 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ವಿಜೇತ ಆಟಗಾರ ₹47.50 ಲಕ್ಷ ಬಹುಮಾನ ಪಡೆಯಲಿದ್ದು, ಸದ್ಯ ಪ್ರಜ್ಞಾನಂದ ಒಂದು ಪಾಯಿಂಟ್ ಮುನ್ನಡೆಯಲ್ಲಿದ್ದಾರೆ.