
ಭಾರತದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಧ್ವಂಸವಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಬಹಾವಲ್ಪುರ ಪ್ರಧಾನ ಕಚೇರಿ ಕೇವಲ 15 ತಿಂಗಳಲ್ಲಿ ಮತ್ತೆ ತಲೆ ಎತ್ತಿದೆ.
ಪಾಕಿಸ್ತಾನ ಸರ್ಕಾರವು ಈ ಉಗ್ರ ಕೇಂದ್ರದ ಮರುನಿರ್ಮಾಣಕ್ಕೆ ಸುಮಾರು 25 ಕೋಟಿ ಪಾಕಿಸ್ತಾನಿ ರೂಪಾಯಿ ನೆರವು ನೀಡಿದ್ದು, ಇದರಲ್ಲಿ 11 ಕೋಟಿ ರೂಪಾಯಿಗಳನ್ನು ಅದ್ದೂರಿ ನಿರ್ಮಾಣಕ್ಕೆ ಬಳಸಲಾಗಿದೆ.
ನವೀಕೃತ ಕೇಂದ್ರದಲ್ಲಿ ಡ್ರೋನ್ ನಿಯಂತ್ರಣ ಕೊಠಡಿಗಳು ಮತ್ತು ಸೈಬರ್ ಸೆಲ್ ಸ್ಥಾಪಿಸಲಾಗಿದ್ದು, ಗಡಿಯಾಚೆಯಿಂದ ಪ್ರಚೋದನೆ ಕಂಡುಬಂದಲ್ಲಿ ಭಾರತವು ಮತ್ತೊಮ್ಮೆ ವಾಯುದಾಳಿ ನಡೆಸಲು ಸಿದ್ಧವಾಗಿದೆ ಎಂದು ಅಜಿತ್ ದೋವಲ್ ಎಚ್ಚರಿಸಿದ್ದಾರೆ.