
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಪಾಲೋಹ್ ಗ್ರಾಮದ ಶಾಲಾ ವಿದ್ಯಾರ್ಥಿಗಳು ಬೆಟ್ವಾ ನದಿಯ ಡ್ಯಾಂನ ಸಣ್ಣ ತಡೆಗೋಡೆ ಮೇಲೆ ಅಪಾಯಕಾರಿಯಾಗಿ ನದಿ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
ಕರುವಾ ಗ್ರಾಮದಿಂದ ಪಾಲೋಹ್‌ನಲ್ಲಿರುವ ಶಾಲೆಗೆ ತಲುಪಲು ಬೇರೆ ಯಾವುದೇ ಸೂಕ್ತ ರಸ್ತೆ ಇಲ್ಲದ ಕಾರಣ ಮಕ್ಕಳು ಕಳೆದ ನಾಲ್ಕೈದು ವರ್ಷಗಳಿಂದ ಇದೇ ಹಾದಿಯಲ್ಲಿ ಸಂಚರಿಸುತ್ತಿದ್ದಾರೆ.
ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಮಕ್ಕಳು ಪ್ರತಿದಿನ ಪ್ರಾಣದ ಹಂಗು ತೊರೆದು ತಡೆಗೋಡೆ ದಾಟುತ್ತಿರುವುದು ಗ್ರಾಮೀಣ ಭಾಗದ ಮೂಲಸೌಕರ್ಯದ ಕೊರತೆಯನ್ನು ಎತ್ತಿ ತೋರಿಸಿದೆ.