
ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಅಖಿಲೇಶ್, ಕೆನಡಾ ಮೂಲದ QuantRise Tech AI ಕಂಪನಿಯಲ್ಲಿ ವರ್ಷಕ್ಕೆ 1.06 ಕೋಟಿ ರೂ. ವೇತನದೊಂದಿಗೆ AI ಎಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ.
ಆದಿತ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಅಖಿಲೇಶ್, ಡೇಟಾ ಸೈನ್ಸ್ ಪದವಿ ಪಡೆದಿದ್ದು, ಪ್ರಸ್ತುತ ಮನೆಯಿಂದಲೇ ಕೆಲಸ (WFH) ಮಾಡುತ್ತಿದ್ದಾರೆ.
ಅದೇ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿ ರಾಜೇಶ್ ಕೂಡ ಅದೇ ಕಂಪನಿಯಲ್ಲಿ 1.06 ಕೋಟಿ ರೂ. ವಾರ್ಷಿಕ ವೇತನದ ಉದ್ಯೋಗವನ್ನು ಪಡೆದಿದ್ದಾರೆ.