
ಬಿಸಿಸಿಐ ಸೀನಿಯರ್ ಮಹಿಳೆಯರ ಎಲೀಟ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವು 7 ವಿಕೆಟ್‌ಗಳಿಂದ ಚಂಡೀಗಢ ತಂಡವನ್ನು ಸೋಲಿಸಿತು.
ಗುಂಪು ಹಂತದ ಎಲ್ಲಾ 7 ಪಂದ್ಯಗಳನ್ನು ಜಯಿಸಿದ ಶುಭಾ ಸತೀಶ್ ನೇತೃತ್ವದ ಕರ್ನಾಟಕ ತಂಡವು ಅಜೇಯವಾಗಿ ಸೂಪರ್ ಲೀಗ್ ಹಂತಕ್ಕೆ ಮುನ್ನಡೆದಿದೆ.
ಪಂದ್ಯದಲ್ಲಿ ವೃಂದಾ ದಿನೇಶ್ ಔಟಾಗದೆ 60 ರನ್ ಮತ್ತು ನಿಕಿ ಪ್ರಸಾದ್ 52 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.