
ಜುಲೈ 31ರಂದು ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ಲೀಟರ್ಗೆ 110.93 ರೂಪಾಯಿ ಮತ್ತು ಡೀಸೆಲ್ ದರ 98.80 ರೂಪಾಯಿ ಇದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದರ ವ್ಯತ್ಯಾಸವಿದ್ದು, ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಪೆಟ್ರೋಲ್ ದರ 112.02 ರೂಪಾಯಿ ಹಾಗೂ ಡೀಸೆಲ್ ದರ 100 ರೂಪಾಯಿ ದಾಟಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 110.17 ರೂಪಾಯಿ ಮತ್ತು ಡೀಸೆಲ್ ದರ 98.10 ರೂಪಾಯಿ ಇದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ದರ ದಾಖಲಾಗಿದೆ.