
ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್‌ನ 1,700 ಕೋಟಿ ರೂಪಾಯಿ ಮೌಲ್ಯದ ಐಪಿಒ ಬಿಡ್ಡಿಂಗ್‌ನ ಅಂತಿಮ ದಿನದಂದು ಹೂಡಿಕೆದಾರರಿಂದ 62.97 ಪಟ್ಟು ಹೆಚ್ಚು ಚಂದಾದಾರಿಕೆ ಹರಿದುಬಂದಿದ್ದು, ಒಟ್ಟು 79,400 ಕೋಟಿ ರೂಪಾಯಿ ಮೌಲ್ಯದ ಬಿಡ್ಡಿಂಗ್ ನಡೆದಿದೆ.
ಈ ಐಪಿಒದಲ್ಲಿ ಅರ್ಹ ಸಾಂಸ್ಥಿಕ ಹೂಡಿಕೆದಾರರ (QIB) ವಿಭಾಗದಲ್ಲಿ ಅತ್ಯಧಿಕ ಅಂದರೆ 153 ಪಟ್ಟು ಹೆಚ್ಚು ಸಬ್‌ಸ್ಕ್ರಿಪ್ಷನ್ ಬಂದಿದ್ದು, ಪ್ರತಿ ಶೇರಿಗೆ 190 ರೂ.ನಿಂದ 201 ರೂ.ಗಳ ಬೆಲೆ ಶ್ರೇಣಿಯನ್ನು ನಿಗದಿಪಡಿಸಲಾಗಿತ್ತು.
ಹೊಸ ಶೋರೂಮ್‌ಗಳ ಸ್ಥಾಪನೆಗಾಗಿ 1,200 ಕೋಟಿ ರೂ. ಹೊಸ ಶೇರು ಹಾಗೂ 500 ಕೋಟಿ ರೂ. ಆಫರ್ ಫಾರ್ ಸೇಲ್ ಒಳಗೊಂಡಿರುವ ಈ ಶೇರುಗಳು 2026ರ ಆಗಸ್ಟ್ 24 ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಲಿವೆ.