
ಅಜಯ್ ದೇವಗನ್ ನಟನೆಯ 'ದೃಶ್ಯಂ 3: ದಿ ಕನ್ಕ್ಲೂಷನ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ ಜಗತ್ತಿನಾದ್ಯಂತ ಒಟ್ಟು 95.10 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ 66.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಹಾಗೂ 80.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ದೇಶಾದ್ಯಂತ ಒಟ್ಟು 15,759 ಪ್ರದರ್ಶನಗಳನ್ನು ಕಂಡಿದೆ.
ಈ ಚಿತ್ರವು ಅಜಯ್ ದೇವಗನ್ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದ್ದು, 'ಸಿಂಗಂ ಅಗೇನ್' ಹಾಗೂ 'ಗೋಲ್ ಮಾಲ್ ಅಗೇನ್' ದಾಖಲೆಗಳನ್ನು ಮುರಿದಿದೆ.