
ಅನುಮಾನಾಸ್ಪದ ವಿದೇಶಿ ಹಣ ರವಾನೆ ಪ್ರಕರಣಗಳನ್ನು ತಡೆಯಲು ಆದಾಯ ತೆರಿಗೆ ಇಲಾಖೆ ದೇಶಾದ್ಯಂತ ಪರಿಶೀಲನಾ ಅಭಿಯಾನ ಆರಂಭಿಸಿದ್ದು, 394 ನಕಲಿ ಸಂಸ್ಥೆಗಳನ್ನು ತನಿಖೆಗೆ ಒಳಪಡಿಸಿದೆ.
ವ್ಯಾಪಾರ ಚಟುವಟಿಕೆ ಇಲ್ಲದಿದ್ದರೂ ವಿದೇಶಕ್ಕೆ ಹಣ ಕಳುಹಿಸಿದ 117 ಸಂಸ್ಥೆಗಳು ಮತ್ತು ಈ ವಹಿವಾಟಿಗೆ ಪ್ರಮಾಣಪತ್ರ ನೀಡಿದ 36 ಚಾರ್ಟರ್ಡ್ ಅಕೌಂಟೆಂಟ್‌ಗಳ ಮೇಲೆ ಇಲಾಖೆ ಕಣ್ಣಿಟ್ಟಿದೆ.
ಸಾಗಣೆ ವೆಚ್ಚದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವರ್ಗಾಯಿಸಿದ ಹಲವು ಸಂಸ್ಥೆಗಳು ನೀಡಿದ ವಿಳಾಸಗಳಲ್ಲಿ ಅಸ್ತಿತ್ವದಲ್ಲೇ ಇಲ್ಲದಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.