
ವ್ಯಾಪಾರಿಗಳಿಗೆ ಮಾಡುವ 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಅಕ್ಟೋಬರ್ 15ರಿಂದ ಶೇಕಡಾ 0.4ರಷ್ಟು ಎಂಡಿಆರ್ ಶುಲ್ಕ ವಿಧಿಸಲು ಕೇಂದ್ರ ಮುಂದಾಗಿದೆ.
ಈ ಹೊಸ ನಿಯಮವನ್ನು ಪ್ರಶ್ನಿಸಿ ಅಡ್ವೊಕೇಟ್ ಅಂಜನ್ ದತ್ತಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.
ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ವರ್ಗಾವಣೆಗೆ ಶುಲ್ಕವಿಲ್ಲದಿದ್ದರೂ, ಸಣ್ಣ ವ್ಯಾಪಾರಿಗಳು ಮತ್ತು ಕಡಿಮೆ ಲಾಭಾಂಶದ ಕ್ಷೇತ್ರಗಳಿಗೆ ಈ ಶುಲ್ಕ ಆತಂಕ ತಂದಿದೆ.