
ಡಬ್ಲ್ಯೂಪಿಎಲ್ 2027ರ ಆಟಗಾರ್ತಿಯರ ಹರಾಜು ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಒಟ್ಟು 146 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಫ್ರಾಂಚೈಸಿಗಳ ಬಳಿ ಒಟ್ಟು 27 ಸ್ಲಾಟ್‌ಗಳು ಮಾತ್ರ ಖಾಲಿ ಇದ್ದು, ಅದರಲ್ಲಿ 20 ಸ್ಲಾಟ್‌ಗಳು ಭಾರತೀಯ ಆಟಗಾರ್ತಿಯರಿಗೆ ಮತ್ತು 7 ಸ್ಲಾಟ್‌ಗಳು ವಿದೇಶಿ ಆಟಗಾರ್ತಿಯರಿಗೆ ಮೀಸಲಿವೆ.
ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಹಾಗೂ ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ಗರಿಷ್ಠ 50 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.