
ಭಾರತವು ಈಗ ಕಮರ್ಷಿಯಲ್ ಚಿಪ್ ತಯಾರಿಸುವ ಹಂತಕ್ಕೆ ತಲುಪಿದ್ದು, ನವದೆಹಲಿಯಲ್ಲಿ 'ಸೆಮಿಕಾನ್ ಇಂಡಿಯಾ 2026' ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ ಮಾತನಾಡಿದ್ದಾರೆ.
ಇತರ ದೇಶಗಳು ಒಂದು ದಶಕದಲ್ಲಿ ಸಾಧಿಸುವುದನ್ನು ಭಾರತವು ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಧಿಸಿದೆ ಎಂದು ಪ್ರಧಾನಿ ಮೋದಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಧುನಿಕ ಮೂಲಸೌಕರ್ಯ ಮತ್ತು ಪಿಎಂ ಗತಿ ಶಕ್ತಿ ಯೋಜನೆಯು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಂತರ ಯುವ ಇಂಜಿನಿಯರ್ಗಳಿಗೆ ಉನ್ನತ ಮಟ್ಟದ ಉದ್ಯೋಗಗಳು ಸೃಷ್ಟಿಯಾಗಲಿವೆ.