
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಈ ಬಾರಿ ಕ್ಯಾಪ್ಟನ್ ಪ್ರಶಾಂತ ಆನೆ ಮೊದಲ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಹೆಜ್ಜೆ ಹಾಕಲಿದೆ.
ಮಧ್ಯಾಹ್ನ 1.36ಕ್ಕೆ ನಂದಿಧ್ವಜಕ್ಕೆ ಸಚಿವರು ಪೂಜೆ ಸಲ್ಲಿಸಲಿದ್ದು, ಸಂಜೆ 4.10ಕ್ಕೆ ಅಂಬಾರಿಯಲ್ಲಿರುವ ದೇವಿಗೆ ಪುಷ್ಪಾರ್ಚನೆ ಬಳಿಕ ಅರಮನೆಯಿಂದ ಜಂಬೂಸವಾರಿ ಆರಂಭವಾಗಲಿದೆ.
ಈ ಮೆರವಣಿಗೆಯಲ್ಲಿ ಒಟ್ಟು 48 ಕಲಾತಂಡಗಳು ಹಾಗೂ 53 ಸ್ತಬ್ಧಚಿತ್ರಗಳು ಭಾಗವಹಿಸಲಿವೆ.