
ಕರ್ನಾಟಕದ ವಿವಿಧ ಕಾರಾಗೃಹಗಳಲ್ಲಿ ಕೈದಿಗಳಿಗೆ ಮೊಬೈಲ್ ನಿಷೇಧವಿದ್ದರೂ ಕಳೆದ 9 ತಿಂಗಳಲ್ಲಿ ಬರೋಬ್ಬರಿ 410 ಮೊಬೈಲ್ಗಳು ಪತ್ತೆಯಾಗಿವೆ.
ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಕಠಿಣ ನಿಯಮಗಳ ಜಾರಿಯಿಂದಾಗಿ ಈ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಒಟ್ಟು ಮೊಬೈಲ್ಗಳ ಪೈಕಿ ಕೇವಲ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ 334 ಮೊಬೈಲ್ಗಳು ಪತ್ತೆಯಾಗಿರುವುದು ವಿಶೇಷ.