
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನೋ-ಬಾಲ್ ಎಸೆದ ರವೀಂದ್ರ ಜಡೇಜಾ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ನೋ-ಬಾಲ್‌ಗಳನ್ನು ಎಸೆದ ಸ್ಪಿನ್ನರ್ ಎಂಬ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಜಡೇಜಾ ಇದುವರೆಗೆ ಒಟ್ಟು 84 ನೋ-ಬಾಲ್‌ಗಳನ್ನು ಎಸೆದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನದ ನೌಮನ್ ಅಲಿ 40 ನೋ-ಬಾಲ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದ 16ನೇ ಓವರ್‌ನಲ್ಲಿ ಜಡೇಜಾ ಎಸೆದ ನೋ-ಬಾಲ್‌ನಿಂದಾಗಿ ಲಂಕಾ ನಾಯಕ ಧನಂಜಯ ಡಿ ಸಿಲ್ವಾ ಅವರ ನಿರ್ಣಾಯಕ ವಿಕೆಟ್ ಪಡೆಯುವ ಅವಕಾಶವನ್ನು ಟೀಂ ಇಂಡಿಯಾ ಕಳೆದುಕೊಂಡಿತು.