
ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಅನೈರ್ಮಲ್ಯದ ಆರೋಪದ ಹಿನ್ನೆಲೆಯಲ್ಲಿ ಹೊಸಕೋಟೆಯಲ್ಲಿರುವ ಜೆಪ್ಟೋ ಸಂಸ್ಥೆಯ ವೇರ್ಹೌಸ್ಗೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಂಗಳವಾರ ಬೀಗ ಹಾಕಿದ್ದಾರೆ.
ತಪಾಸಣೆ ವೇಳೆ ಲೇಬಲಿಂಗ್ ಲೋಪ, ತಪ್ಪು ಬ್ರ್ಯಾಂಡಿಂಗ್ ಮತ್ತು ಆಹಾರ ಸಂಗ್ರಹಣೆಯಲ್ಲಿನ ಅಕ್ರಮಗಳು ಪತ್ತೆಯಾಗಿದ್ದು, ಇದು 2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ.
ಆಗಸ್ಟ್ 10ರಂದು ನಡೆದ ಪ್ರತ್ಯೇಕ ತಪಾಸಣೆಯಲ್ಲಿ 132 ಕೆ.ಜಿ. ಆಹಾರ ಪದಾರ್ಥಗಳು ಮತ್ತು 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.