
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಅಕ್ಟೋಬರ್ 23ರಿಂದ 25ರವರೆಗೆ ನಡೆಯಲಿರುವ ಕಿತ್ತೂರು ಉತ್ಸವದ ಮುನ್ನವೇ ರಾಣಿ ಚನ್ನಮ್ಮ ಮೂರ್ತಿಯ ಖಡ್ಗ ಹಿಡಿದ ಕೈ ತುಂಡಾಗಿ ಬಿದ್ದಿದೆ.
ಮೂರ್ತಿ ಸ್ವಚ್ಛ ಮಾಡುವ ವೇಳೆ ಕಾರ್ಮಿಕರ ಅಚಾತುರ್ಯದಿಂದ ಈ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ತಾಲೂಕು ಆಡಳಿತವು ತಕ್ಷಣವೇ ಕೇಸರಿ ಬಟ್ಟೆಯಿಂದ ಮೂರ್ತಿಯನ್ನು ಮುಚ್ಚಿದೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ವೀರಪ್ಪ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿತ್ತೂರು ಠಾಣೆ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.