
ತುಂಗಭದ್ರಾ ಜಲಾಶಯದಲ್ಲಿ 82.60 ಟಿಎಂಸಿ ನೀರು ಸಂಗ್ರಹವಿರುವುದರಿಂದ, ಇಂದಿನಿಂದ 90 ದಿನಗಳ ಕಾಲ ಕಾಲುವೆಗಳಿಗೆ 4100 ಕ್ಯೂಸೆಕ್ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ.
ಜಲಾಶಯಕ್ಕೆ ಪ್ರಸ್ತುತ 41,167 ಕ್ಯೂಸೆಕ್ ಒಳಹರಿವು ಇದ್ದು, ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನವೆಂಬರ್ 10ರವರೆಗೆ ನಿಗದಿತ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುವುದು.
ಸೆಪ್ಟೆಂಬರ್ 11ರಂದು ಮುಂದಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ತೆಲಂಗಾಣಕ್ಕೆ 3 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 30 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.